ನನ್ನ ಚಿಕ್ಕ ವಯಸಿನಲ್ಲಿ ನಾನು ಓದಿದ ಕಥೆ ಇದು. ನನ್ನ ಮನಸ್ಸಿಗೆ ಬಹಳ ನಾಟಿದೆ.ಒಂದು ಊರಿನಲ್ಲಿ ಇಬ್ಬರು ಸ್ನೇಹಿತರು ಇದ್ದರು ಅವರು ಒಂದೇ ಶಾಲೆಗೆ ಹೋಗುತಿದ್ದರು ಅವರಲ್ಲಿ ಒಬ್ಬ ಶ್ರೀಮಂತ ಹುಡುಗ ರಾಮು ಮತ್ತೊಬ್ಭ ಬಡ ಹುಡುಗ ಭೀಮ . ಅವರು ದಿನವೂ ಮದ್ಯಾನ್ಹ ಊಟಕ್ಕೆ ಮನೆಗೆ ಬರುತ್ತಾ ಇದ್ದರು .ಊಟ ಮುಗಿಸಿ ನಂತರ ಶಾಲೆಗೆ ಹೋಗುತ್ತಿದ್ದರು.ಒಂದು ದಿನ ಶ್ರೀಮಂತ ಹುಡುಗ ಬಡವನನ್ನು ನಾಳೆ ನನ್ನ ಹುಟ್ಟಿದ್ದ ಹಬ್ಬ ನಮ್ಮ ಮನೆಗೆ ಊಟಕ್ಕೆ ಬಾ ಎಂದು ಕರೆದನು .ಬಡವನಿಗೆ ಬಹಳ ಸಂತೋಷವಾಯಿತು .ಬಡವನಿಗೆ ತಂದೆ ಇರಲಿಲ್ಲ ಅವನ ತಾಯಿ ಕಷ್ಟ ಪಟ್ಟು ಅವರಿವರ ಮನೆಗಳಲ್ಲಿ ಕಸ, ಮುಸುರೆ ಮಾಡಿ ಅವನನ್ನು ಓದಿಸುತ್ತಿದ್ದರು . ಮಧ್ಯಾನ್ಹ ಊಟಕ್ಕೆ ಪ್ರತಿದಿನ ಅವನಿಗೆ ಬಿಸಿ ಬಿಸಿ ರಾಗಿ ಮುದ್ಧೆ ಮಾಡುತ್ತಿದ್ದರು. ಅವನು ಊಟ ಮಾಡಿ ಶಾಲೆಗೆ ಬರುತಿದ್ದ .ಅಂದು ಭೀಮ ಅಮ್ಮನಿಗೆ ಹೇಳಿದ ಅಮ್ಮ ನಾಳೆ ನನಗೆ ರಾಮುವಿನ ಮನೆಯಲ್ಲಿ ಊಟ, ನಾನು ಊಟಕ್ಕೆ ಬರುವುದಿಲ್ಲ.
ಅಂದು ರಾತ್ರಿ ಮಲಗಿ ಬೆಳೆಗ್ಗೆ ಯಾವಾಗ ಆಗುತ್ತದೆ ಎಂದು ಕಾಯುತಿದ್ದ.ರಾತ್ರಿ ಕನಸಿನಲ್ಲಿ ಊಟದ್ದೇ ಕನಸು ಮಾರನೇ ದಿನ ಬೇಗೆ ತಯಾರಾಗಿ ಶಾಲೆಗೆ ಹೋದ .ರಾಮು ಕೇಳಿದ "ಇಂದು ನಮ್ಮ ಮನೆಯಲ್ಲಿ ಊಟ ಅಮ್ಮನಿಗೆ ಹೇಳಿ ಬಂದಿದ್ದಿಯಾ?" ಹೇಳಿದೆನೆಂದು ತಲೆಯಾಡಿಸಿದ.ಮಧ್ಯಾನ್ಹ ಯಾವಾಗ ಆಗುವುದೋ ಎಂದು ಕಾಯುತಿದ್ದ. ಊಟದ ಘಂಟೆ ಬಾರಿಸಿತು.ಇಬ್ಬರು ಬೇಗ ಬೇಗ ರಾಮುವಿನ ಮನೆಗೆ ಬಂದರು.ರಾಮುವಿನ ಮನೆ ಬಹಳ ದೊಡ್ಡದಾಗಿತ್ತು . ಸರಿ, ರಾಮುವಿನ ಮನೆಗೆ ಬಂದಿದ್ದು ಆಯಿತು ಊಟದ ಮನೆಗೆ ಪ್ರವೇಶಿಸಿದರು ಅಲ್ಲಿ ದೊಡ್ಡ ಮೇಜಿನ ಮೇಲೆ ಹಣ್ಣಿನಬುಟ್ಟಿಯಲ್ಲಿ ಬಗೆ ಬಗೆಯ ಹಣ್ಣುಗಳು ಇತ್ತು .ಅಡಿಗೆಭಟ್ಟ ಒಂದು ಮುಚ್ಚಿಟ್ಟ ಪಾತ್ರೆಯಲ್ಲಿ ಏನನ್ನೋ ತಂದಿಟ್ಟು ಹೋದ. ರಾಮು ಅದನ್ನು ತೆಗೆದು ಭೀಮನಿಗೆ ಬಡಿಸಿದ, ಅದನ್ನು ನೋಡಿದ ತಕ್ಷಣ ಭೀಮ ಗರಬಡಿದವನಂತೆ ಕುಳಿತ .ರಾಮು ಹೇಳುತ್ತಾ ಹೋದ "ಇಂದು ನನ್ನ ಹುಟ್ಟಿದ ಹಬ್ಬ ಅದಕ್ಕಾಗಿ ವಿಶೇಷ ಅಡಿಗೆ ಈ ಮುದ್ದೆ " ಭೀಮನಿಗೆ ಅವನ ಮಾತುಗಳು ಕೇಳಿಸಲೇ ಇಲ್ಲ.ಸುಮ್ಮನೆ ತಿನ್ನುತ್ತಲೇ ಇದ್ದ ...............................................
No comments:
Post a Comment